Thursday, February 25, 2010

ಕನ್ನಡ ಕವಿ ,ರಸ್ಟ್ರ-ಕವಿ-ಕುವೆಂಪು

ಓ ನನ್ನ ಚೇತನ, ಆಗು ನಿ ಅನಿಕೇತನ!
ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ,
ಎದೆಯ ಬಿರಿಯ ಭಾವ ಬೀಸಿ,
ಓ ನನ್ನ ಚೇತನ, ಆಗು ನಿ ಅನಿಕೇತನ!

ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ, ಆಗು ನಿ ಅನಿಕೇತನ!

ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು,
ಕೊನೆಯನೆಂದು ಮುಟ್ಟದಿರು,
ಓ ಅನಂತವಾಗಿರು
ಓ ನನ್ನ ಚೇತನ, ಆಗು ನಿ ಅನಿಕೇತನ!

ಅನಂತ ತಾನ್ ಅನಂತವಾಗಿ, ಆಗುತಿಹನೆ ನಿತ್ಯ ಯೋಗಿ,
ಅನಂತ ನೀ ಅನಂತ ವಾಗು, ಆಗು ಆಗು ಆಗು,
ಓ ನನ್ನ ಚೇತನ, ಆಗು ನಿ ಅನಿಕೇತನ!


ಕನ್ನಡ ಕವಿ ,ರಸ್ಟ್ರ-ಕವಿ-ಕುವೆಂಪು

No comments:

Post a Comment